ಕ್ರಿಸ್ಟಲ್ ಡಿಸೋಜಾ ರವರು ಭಾರತೀಯ ದೂರದರ್ಶನ ನಟಿ.'ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ'ನಲ್ಲಿ ಜೀವಿಕಾ ವಧೇರ ಎಂಬ ಪಾತ್ರದಲ್ಲಿ,'ಏಕ್ ನಯೀ ಪೆಹೆಚಾನ್'ನಲ್ಲಿ ಸಾಕ್ಷಿ ಎಂಬ ಪಾತ್ರದಲ್ಲಿ, ೨೦೧೬ ರಲ್ಲಿ ಝೀ ಟಿವಿಯ 'ಬ್ರಹ್ಮರಾಕ್ಷಸ್' ಧಾರವಾಹಿಯಲ್ಲಿ ರೈನಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. == ಜನನ == ಕ್ರಿಸ್ಟಲ್ ಡಿಸೋಜಾ ರವರು ಮಾರ್ಚ್ ೧,೧೯೯೦ ರಲ್ಲಿ ಮುಂಬೈ ಯಲ್ಲಿ ಜನಿಸಿದರು. == ವೃತ್ತಿ ಜೀವನ == ಕ್ರಿಸ್ಟಲ್ ಡಿಸೋಜಾ ಅವರು ತಮ್ಮ ವೃತ್ತಿ ಜೀವನವನ್ನು ೨೦೦೭ ರಲ್ಲಿ ಬಾಲಾಜಿ ಟೆಲಿಫಿಲ್ಮ್ಸ್ ನ 'ಕಹೆ ನಾ ಕಹೆ' ಧಾರವಾಹಿಯ ಮೂಲಕ ಪ್ರಾರಂಭಿಸಿದರು.ಇದರಲ್ಲಿ ಅವರು ಕಿಂಜಲ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು.ನಂತರ 'ಕ್ಯಾ ದಿಲ್ ಮೆ ಹೇ'ನಲ್ಲಿ ತಮನ್ನಾ ಎಂಬ ಪಾತ್ರದಲ್ಲಿ ಅಭಿನಯಿಸಿದರು.೨೦೦೮ ರಲ್ಲಿ ಸ್ಟಾರ್ ಪ್ಲಸ್ ನ 'ಕಸ್ತೂರಿ'ಯಲ್ಲಿ ನವ್ನೀತ್ ಮತ್ತು 'ಕಿಸ್ ದೇಶ್ ಮೆ ಹೇ ಮೇರಾ ದಿಲ್'ನಲ್ಲಿ ವೀರಾ ಪಾತ್ರದಲ್ಲಿ ಕಾಣಿಸಿಕೊಂಡರು.೨೦೧೦ ರಲ್ಲಿ ಸೋನಿ ಟಿವಿಯ 'ಬಾತ್ ಹಮಾರಿ ಪಕ್ಕೀ ಹೇ'ನಲ್ಲಿ ತಾರಾ ಪಾತ್ರದಲ್ಲಿ ಕಾಣಿಸಿಕೊಂಡರು.ಸೋನಿ ಟಿವಿಯ 'ಆಹಾತ್'ನಲ್ಲಿ ಕಿರು ಪಾತ್ರವನ್ನು ಮಾಡಿದ್ದಾರೆ.೨೦೧೧ ರಲ್ಲಿ 'ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ'ನಲ್ಲಿ ಜೀವಿಕಾ ವಧೇರ ಪಾತ್ರದಲ್ಲಿ, ಡಿಸೆಂಬರ್ ೨೦೧೩ ರಲ್ಲಿ 'ಏಕ್ ನಯೀ ಪೆಹೆಚಾನ್'ನಲ್ಲಿ ಸಾಕ್ಷಿ ಪಾತ್ರ,೨೦೧೬ ರಲ್ಲಿ 'ಬ್ರಹ್ಮರಾಕ್ಷಸ್'ನಲ್ಲಿ ರೈನಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.೨೦೧೮ ರಲ್ಲಿ ಕಲರ್ಸ್ ಟಿವಿಯ 'ಬೇಲನ್ ವಾಲಿ ಬಹು'ನಲ್ಲಿ ರೂಪಾ ಪಾತ್ರದಲ್ಲಿ, ಅವರ ಅಭಿನಯಕ್ಕೆ, ಅತ್ಯುತ್ತಮ ನಟಿಗಾಗಿ ಗೋಲ್ಡ್ ಅವಾರ್ಡ್ಸ್ ಅನ್ನೂ ಗೆದ್ದರು. == ಮಾಧ್ಯಮ == ೨೦೧೭ ರಲ್ಲಿ ಟಾಪ್ ೨೦ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಕ್ರಿಸ್ಟಲ್ ರವರು ೫ನೇ ಸ್ಥಾನ ಪಡೆದಿದ್ದಾರೆ. == ನಟಿಸಿದ ಧಾರವಾಹಿಗಳು == == ಇತರ ಕೆಲಸಗಳು == === ಥಿಯೇಟರ್ ಕೆಲಸ ಮತ್ತು ಕಾರ್ಯಕ್ರಮ ಪ್ರದರ್ಶನಗಳು === ಕ್ರಿಸ್ಟಲ್ ರವರು ಕಾಲೇಜಿಗೆ ಹೋಗಿ ಅನೇಕ ರಂಗ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದರು.ಇದರಿಂದ ಅವರಿಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಲು ಸಾಧ್ಯವಾಯಿತು.ಫೆಬ್ರವರಿ ೨೦೧೭ ರಲ್ಲಿ ಅವರು ಲಾಕ್ಮೇ ಫ್ಯಾಷನ್ ವೀಕ್ ನಲ್ಲಿ ಕಾಣಿಸಿಕೊಂಡರು.೨೦೧೫, ೨೦೧೬ ಮತ್ತು ೨೦೧೭ ರಲ್ಲಿ ಕರಣ್ ಟಕರ್ ವಿರುದ್ಧ ಕಲರ್ಸ್ ಟಿವಿಯ ಮಿರ್ಚಿ ಟಾಪ್ ೨೦ ರಲ್ಲಿ ಕಾಣಿಸಿಕೊಂಡರು. === ಎಸ್ಕೇಪೆಕ್ಸ್ ಅಪ್ಲಿಕೇಶನ್ ಬಿಡುಗಡೆ === ಏಪ್ರಿಲ್ ೨೦೧೭ ರಲ್ಲಿ ಕ್ರಿಸ್ಟಲ್ ರವರು ತಮ್ಮದೇ ಆದ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು.ಈ ಅಪ್ಲಿಕೇಶನ್ ನಲ್ಲಿ, ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಅವರೊಂದಿಗೆ ಸಂವಹನ ನಡೆಸಬಹುದಿತ್ತು ಹಾಗೂ ಅವರನ್ನು ಭೇಟಿಯಾಗಲು ಮತ್ತು ಸ್ವಾಗತಿಸಲು ಸಾಧ್ಯವಿತ್ತು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==